ಆಹ್ವಾನ…

ಫೆಬ್ರವರಿ 25, 2007 at 3:55 ಅಪರಾಹ್ನ (ಹನಿ ಹನಿ...ಇಬ್ಬನಿ...)

ಆ ಬಾನ ದಾಟೋಣ

ಈ ಕಣ್ಣ ತೆರೆಯೋಣ

ಬಾನ ಬಣ್ಣಕೂ ಮೀರಿ

ಮಿನುಗೋಣು ಬಾರ….

ಚುಕ್ಕಿ ಚಂದ್ರಮರ ಎದೆಯ

ಮೇಲೆ ಮೆಲ್ಲಡಿಯಿಡುತಾ

ಮಣ್ಣಿಂದ ಮಣ್ಣಿಗೆ

ಜಾರೋಣು ಬಾರಾ…

                                       ~ಶಿವಪ್ರಸಾದ್ ಹಳಿಮನಿ

Advertisements

Permalink ನಿಮ್ಮ ಟಿಪ್ಪಣಿ ಬರೆಯಿರಿ

ಕನಸಲ್ಲಿ ಗಾಂಧಿ ರಸ್ತೆ

ಫೆಬ್ರವರಿ 25, 2007 at 3:51 ಅಪರಾಹ್ನ (ಹನಿ ಹನಿ...ಇಬ್ಬನಿ...)

ಮಹಾತ್ಮ ಗಾಂಧಿಯ

ಹೆಸರನ್ನೊತ್ತ ರಸ್ತೆ

ಅವನಂತೆ ನೇರ ವ್ಯಕ್ತಿತ್ವವನ್ನು

ಸಾರುವಂತೆ ಸೆರಗ ಹೊದ್ದು ನಿಂತಿದ್ದಳು

ಕನ್ನಡತಿಯೇ ನಾಚುವಂತೆ….(ಕನಸಲ್ಲಿ)

                {ಇಲ್ಲಿ ರಸ್ತೆ ಅವಳಾಗಿದ್ದಳು}

                         ~ ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹನಿ ಮುತ್ತಾದ ಹೊತ್ತು

ಫೆಬ್ರವರಿ 25, 2007 at 3:47 ಅಪರಾಹ್ನ (ಹನಿ ಹನಿ...ಇಬ್ಬನಿ...)

ಭದ್ರವಾಗಿದ್ದ ಹೃದಯ

ಕೋಟೆಯ ಒಳಗೆ

ಅದು ಹೇಗೆ ಹೊಕ್ಕೆನೋ

ಕಾಣೆ?…. ನಾನು ಹನಿ….

ಹೊರಬರುವಾಗ ನಲ್ಲೆ

ಹಾಲುಗೆನ್ನೆಯ ಮೇಲೆ ಮುತ್ತಾಗಿ ಹೋಗಿದ್ದೆ….

                                               ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ತುಟಿಗಳೊಳಗೆ ಮುತ್ತಾಗಿ….

ಫೆಬ್ರವರಿ 25, 2007 at 3:44 ಅಪರಾಹ್ನ (ಹನಿ ಹನಿ...ಇಬ್ಬನಿ...)

ನಿನ್ನ ಮೈ ಸ್ಪರ್ಶಕೆ

ಮನ ಕರಗಿ ಆವಿಯಾಗಿತ್ತು

ದಿಟ್ಟಿಸುವ ಸೂರ್ಯನನ್ನು ಎದುರಿಸಿ

ಆದರೆ ಬಹಳ ಹೊತ್ತು ನಿಲ್ಲಲಾಗಲಿಲ್ಲ..

ಒಡೆದ ತುಟಿಗಳ ಮೇಲೆ

ಒಣಗಿದ ಹನಿಗಳನ್ನು

ಕಂಡು ಕರಗಿ ಹೋಗಿದ್ದೆ

ಕಣ್ತೆರೆಯುವ ಮೊದಲೇ

ಅಪ್ಪಿದ ತುಟಿಗಳೊಳಗೆ…ಮುತ್ತಾಗಿದ್ದೆ….

                                                ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ನಾಚಿಕೆ…

ಫೆಬ್ರವರಿ 25, 2007 at 3:40 ಅಪರಾಹ್ನ (ಹನಿ ಹನಿ...ಇಬ್ಬನಿ...)

ಪ್ರತಿಯೊಂದು ಮಾತು

ಕೊನೆಯಾದಾಗಲೆಲ್ಲ ಏನೋ ತುಡಿತ,

ಏನೋ ಭಯ

ಜೊತೆಜೊತೆಗೆ ನಾಚಿಕೆ

ಎಷ್ಟು ಬೇಗ ಮುಗಿಸಿದೆಯೆಂದು….

                                          ಈ ಕವನವೂ….

                                          ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಮೂರ್ಖ….

ಫೆಬ್ರವರಿ 25, 2007 at 3:36 ಅಪರಾಹ್ನ (ಹನಿ ಹನಿ...ಇಬ್ಬನಿ...)

ಹೇ ಮನಸೇ… ನಿನ್ನಂತಹ

ಶತಃಮೂರ್ಖ ಇನ್ನೊಬ್ಬನಿಲ್ಲ.

ನಿನ್ನಾಕೆಯ ಕೈಗಳನ್ನಿಡಿದು ನೀನು

ಹೊರಟಾಗಲೆಲ್ಲ ನಾನು ಮುಖವನ್ನು

ಕೆಳಗೆ ಮಾಡಿ ಕಳ್ಳನಂತೆ ನೊಡುತ್ತಿದ್ದೆ…

ಆದರೆ ನನಗಿಂತ ಮೋಸಗಾರನು ನೀನು

ನನಗೆ ಕೇಳದಂತೆಯೇ ಪಿಸುಗುಡುತ್ತಿದ್ದೆ

ನಿನಗೆ ಕಣ್ಣಾಗುವೆ ಎಂದು….

                                        ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹೇ… ಮನಸೇ

ಫೆಬ್ರವರಿ 25, 2007 at 3:31 ಅಪರಾಹ್ನ (ಕವನ~ಬನ)

ಹೇ ಮನಸೆ…. ಇನ್ನೊಮ್ಮೆ

ಹೀಗೆ ಕದ್ದು ನೋಡಬೇಡ.

ಮರಗಳ ಹಿಂದಿನ ಮಾತನ್ನು

ನೀ ಹಾಗೆ ಕೇಳುವುದು ತಪ್ಪಲ್ಲ..

ಆದರೆ ಆ ಗುಸು ಪಿಸುಮಾತಿನ

ನಡು ನಡುವಿನ ನಡುಕವನ್ನು

ನೋಡುವುದು ತಪ್ಪು….

ಕೋಪಿಸಿಕೊಂಡೆಯಾ.. ಕ್ಷಮಿಸು….

ಎನ್ನಲಾರೆ, ನಾಳೆ ಮತ್ತೆ ಬಾ

ನಿನಗಾಗಿ ಇನ್ನೊಂದು ಜೋಡಿ

ಕಾದಿರುತ್ತದೆ … ಆದರೆ … ನಿನಗೆ..?

ನಡುಕ ಹುಟ್ಟಿಸಿತೇ ನನ್ನ ಮಾತು

ಹೌದಾದರೆ ನಾನು ಖಂಡಿತವಾಗಿಯೂ

ನಿನ್ನ ಮನಸ್ಸೆ….

                  ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಅನಾವರಣ….

ಫೆಬ್ರವರಿ 11, 2007 at 3:42 ಅಪರಾಹ್ನ (’ಸಾಲ’ದ ಸಾಲು)

Good Morning ಗೆಳತಿಯರೆ, ಗೆಳಯರೆ….

ನಾನು ಎಷ್ಟೇ ಬಡಾಯಿ ಕೊಚ್ಚುಕೊಂಡು ಧೈರ್ಯವಾಗಿ ಎದೆ ತಟ್ಟಿ, ತೊಡೆ ತಟ್ಟಿ, ನಾನು ಧೈರ್ಯವಂತ ಅಂಥ Utility Building ಮೇಲೆ ಕೆಳಗೆ ನೊಡ್ದೆ ಹೇಳಿದರೂ ಪುಕ್ಕಲು ಸ್ವಭಾವದ ಹುಡುಗ ಅಂಥ ನಿಮಗೆ ಗೊತ್ತು..

ಆದ್ರೇನೂ ಭಯೋತ್ಪಾದಕರ ಬಗ್ಗೆ ಮಾತಾಡ್‍ಬಾರದೂ ಅಂಥ ಹೇಳ್ತೀರಾ…? ಆದ್ರೂ ಹೇಳ್ತೀನಿ ಕೇಳಿ….

ಅವರ ಬದುಕಿನ ಬಗ್ಗೆ ನಿಮಗನಿಸಿದ್ದನ್ನು ನೀವೂ ಹೇಳಿ.

ಅವರು ಯಾರು….? ಹಾಗೆಂದ ತಕ್ಷಣ ಭಾರತ ಮಾತೆಯ ಮುಕುಟ ಮಣಿಯಂತಿರುವ ಕಾಶ್ಮೀರದ ಕಡೆ ಮುಖ ಮಾಡಬೇಡಿ…ನೀವು ಅಷ್ಟೊಂದ್ ದಡ್ಡರಲ್ಲ ಅಂಥ ನಂಗೊತ್ತು. ಆದರೆ ನಾವ್ ಯಾಕೆ ಭಯೋತ್ಪಾದಕರನ್ನ ನಮ್ಮಲ್ಲೇ ಬೆಳೆಸ್ತೀವಿ…?(ಮುಂದೆ ಕೆಲಸಕ್ಕೆ ಬರತಾನೆ ಅಂಥಾನ .. ?).

ಕೆಲವು ದಿನಗಳ ಹಿಂದೆ ಒಂದು ಟಿ.ವಿ. ಚಾನೆಲ್ ಒಂದರಲ್ಲಿ ಉಗ್ರಗಾಮಿ ಕುಟುಂಬವೊಂದರ ಸಂದರ್ಶನ ನಡೆಯುತಿತ್ತು..ಅದರ ಚೂರು ಹೀಗಿದೆ…

ಅದು ಗಾವುದ ಗಾವುದ ದೂರದೂರು…ಬೆಳ್ಳಂಬೆಳಗ್ಗೆ ಬಿದ್ದ ಮಂಜಿನ ಹನಿ ಮುಸ್ಸಂಜೆಯಲ್ಲೂ ಮಿನುಗುತಿತ್ತಲ್ಲಿ.

ಅದನ್ನೆಲ್ಲ ಕರಗಿಸ್ತೀವಿ ಅಂಥ ಹೊರಟಂತಿತ್ತು ಬಾಂಬ್, ಶೆಲ್, ಗುಂಡುಗಳ ದಾಳಿ…ಕರಗುವುದ ಗೆಳೆಯಾ… ಎದೆಯ ನಂಜಿನ ಮುಂದೆ ಕೆಂಪಗೆ ಕಾವು ಏರಿ ಹರಿದ ರಕ್ತ…? ಎಂದು ನನ್ನ ಮನಸು ಈಗಲೂ ನನ್ನನ್ನ ಪ್ರಶ್ನಿಸುತ್ತಿದೆ.

ಇದೆಲ್ಲ ಅಲ್ಲಿನ ವಾಸಿಗಳಿಗೆ ಮಾಮುಲಾಗಿ ಹೋಗಿತ್ತು ಅಂಥ ಅವರ ಮಾತುಗಳ ಕೇಳಿದವರಿಗೆ ಅನ್ನಿಸುತ್ತದೆ…

ಆದರೆ ಆ…. ಕುಟುಂಬಕ್ಕೆ ಇದೆಲ್ಲ ಮಾಮೂಲಿ ಅನ್ನೋದಾದರೂ ಹೇಗೆ…? ಪ್ರತಿಯೊಂದು ಗುಂಡಿನ ಶಬ್ದ ಕೇಳಿದಾಗಲೂ ಆ ಮುದಿ ದೇಹ ತನ್ನ ಆಸರೆಗಿದ್ದ ಮಗನನ್ನು ನೆನೆಸಿಕೊಂಡು ಎಷ್ಟು ಸಾರಿ ಸತ್ತು ಹುಟ್ಟಿದೆಯೋ….? ಅಂತಹ ತಾಯಿ ತಂದೆ, ಹೆಂಡತಿ ಮಕ್ಕಳಿಗೆ ಈ ಜಗತ್ತೇ ಭಯೋತ್ಪಾದಕ, ಕತ್ತಲಲ್ಲಿ ಸಮರ ಸಾರೋ ನಯವಂಚಕ. ಹಗಲಿನಲ್ಲಿ ಮನೆಗೆ ನುಗ್ಗಿ ಬೂಟಿನ ರುಚಿ ತೋರಿಸೋ ಪೊಲೀಸರ ಜಗತ್ತು….ಇದರಿಂದ ಅವರ ಮನೆಯೊಳಗಿರುವ ನಮ್ಮವರನ್ನು ನಾವು ಏಕೆ ಮಿತ್ರರೆ ದೂರ ಮಾಡ್ಕೊಬೇಕು…?

ಅವರ ಮಕ್ಕಳು ದಾರಿಗಿಳಿದರೆ ನೆಮ್ಮದಿಯಾಗಿ ನಡೆಯೋದಕ್ಕೆ ಬಿಟ್ಟಿದೀವಾ….ಆಕೆಯ ಕೊರಳಲ್ಲಿನ ತಾಳಿಯನ್ನು ಅದೆಷ್ಟು ಹೆಂಗಸರು ಕೇಳಿಲ್ಲ…ಇದೆಲ್ಲ ಎಷ್ಟು ದಿನ ಅಂಥ…? ನಾವು ಅಂಥಹ ಅಪ್ಪ, ಮಗ, ಗಂಡನಿಗಿಂತ ಬಲು ದೊಡ್ಡ ಭಯೋತ್ಪಾದಕರು ಅಲ್ಲವೇ…

ಮರೆಯಬೇಡಿ ಪ್ರಪಂಚ ಅಂದರೆ ನಾವು ಪ್ರತಿ ಕ್ಷಣವೂ ನೋವನ್ನು ಕೊಟ್ಟಿದ್ದೇವೆ, ಅದಕ್ಕೆ ಕಾರಣ ಅವರೆ ಇರಬಹುದು ಆದರೆ ನಾವು ಪಾಲುದಾರರಾಗುವುದುಬೇಡ.

ಬದುಕಿದಷ್ಟು ದಿನ ಸೂರ್ಯನನ್ನ ಕಾಣದ ಜನ ಸಾವಿನ ನಂತರವೂ ನನ್ನ ಹೆಣ ನನ್ನ ಕುಟುಂಬಕ್ಕೆ ಸಿಗಬಾರದು ಅಂಥ ಬೇಡಿಕೊಳ್ಳುವ ಸ್ಥಿತಿ ಎಂತಹ ಬರ್ಬರತೆಯನ್ನು ಕಣ್ಣಿಗೆ ಕಟ್ಟಿ ಕೊಡುತ್ತೆ ಅಲ್ಲವೇ…ಜೊತೆಗೆ ನಮ್ಮ ಧೈರ್ಯವನ್ನು ಸಹ…! ಕೊಂದೆ ಎಂಬ ಭಾವನೆಯನ್ನು ಗೆದ್ದೆ ಎನ್ನುವ ಮನಃಸ್ಥಿತಿ ಮಣ್ಣು ಮಾಡಿ ಬಿಡುತ್ತದೆ ಯಾವ ಕಾರಣವನ್ನು ಹೇಳದೆ, ನಾವೆಲ್ಲ ಗೆಲುವಿನ ಬೆನ್ನತ್ತಿ ಹೊರಟಿರುವ ಭಯೋತ್ಪಾದಕರಲ್ಲವೇ…? ನಮ್ಮವರ ಸುಖದುಃಖಗಳನ್ನು ಎಷ್ಟು ಭಾರಿ ಮಣ್ಣು ಮಾಡಿಲ್ಲ, ಒಂದು ಮಣ್ಣಿನ ಕಣವನ್ನೂ ನಮ್ಮ ಕೈಗಂಟಿಸಿಕೊಳ್ಳದೆ….

                          ~ಶಿವಪ್ರಸಾದ್ ಹಳಿಮನಿ

Permalink 1 ಟಿಪ್ಪಣಿ

….ನೀಲ್ಗನ್ನಡಿ

ಫೆಬ್ರವರಿ 11, 2007 at 3:40 ಅಪರಾಹ್ನ (ಕವನ~ಬನ)

ಆ ನೀಲಿ ಸಮುದ್ರ, ಕನ್ನಡಿಯನ್ನು

ನಾಚಿಸುವಂತೆ ಮೈ ಹಾಸಿ ಮಲಗಿತ್ತು..

ಗರ್ವಿ ಸೂರ್ಯ ತನ್ನ ಪ್ರಖರತೆಯನ್ನು

ತಾನೆ ತಾಳದೆ ಮೋಡದ ಮರೆಯಲ್ಲಿದ್ದ….

ಆ ದಡದ ಮೇಲೆ ಹೆಜ್ಜೆ ಇಡುತ್ತಲೆ

ಮೇಲಿದ್ದ ಆ ಬಾನು ತನ್ನ ನೀಲಾ

ನಕಾಶೆಯನ್ನು ನನಗೆಂದೆ ಆ

ಸಮುದ್ರದ ಮೇಲೆ ಚಿತ್ರಿಸಿದಂತಿತ್ತು…

ಒಂದು ಕ್ಷಣ ಹೆಜ್ಜೆಗಳು ವಿಚಲಿತವಾದವು

ಎಡಬದಿಯಲ್ಲಿದ್ದ ಆ ನಕಾಶೆಯನ್ನು

ದಿಟ್ಟಿಸಿ ಕಣ್ಣುಗಳು ಕಾಣದಿದ್ದುದನು ಹುಡುಕಿದವು

 ಅಸ್ಪಷ್ಟವಾಗಿದ್ದಂತೆ ಕಂಡರೂ ಸ್ಪಷ್ಟವಾಗಿತ್ತು

ಅದು ನನ್ನ ಮುಖ ಇನ್ನೂ ಬಗ್ಗಿದೆ

ಎದೆ ಬಡಿತ ಹೆಚ್ಚಾಗಿತ್ತು

ಪೂರ್ತಿಯಾಗಿ ಕಾಣುವುದರಲ್ಲಿದ್ದೆ

ಪಾಪಿ ಸೂರ್ಯ ಗೆದ್ದು ಬಿಟ್ಟಿದ್ದ ನಾನು

ಮುಳುಗುತ್ತಿದ್ದೆ ಆ ಸಮುದ್ರದ ಅಲೆಗಳನ್ನು

ಎಬ್ಬಿಸಿ….

                   ~ಭಾವಬೃಂಗ

Permalink ನಿಮ್ಮ ಟಿಪ್ಪಣಿ ಬರೆಯಿರಿ

ನಾಳೆ….ಎಂದವಳೆ….

ಫೆಬ್ರವರಿ 11, 2007 at 11:04 ಫೂರ್ವಾಹ್ನ (ಕವನ~ಬನ)

ಸಿಕ್ಕಾಗಲೆಲ್ಲಾ ನಾಳೆಯೆನ್ನುವ ಗೆಳತಿ

ಇಂದು ಎನಲೇಕೆ ಭಯ…..?

ಮುಂದೆ ನಾನಿರದಿರಲು

ಹಿಂದೆ ನೋಡುವ ಧೈರ್ಯವಿದೆಯೆ ನಿನಗೆ….?

 (ಎಂದು ಕೇಳಿದರೆ)

ಗೆಳೆಯ ನೀನಿರದಿರಲು ಹಿಂದೆ

ನೋಡುವುದೇಕೆ….? ನಿನ್ನ ಹೆಜ್ಜೆಯ ಗುರುತು

ಕೈ ಹಿಡಿದು ನಡೆಸುವುದು

ನಿನಗಿಂತ ಮೊದಲೆ ನಾ ಸೇರಬಲ್ಲೆ…….

(ಎನ್ನುವ ಉತ್ತರ ಆಕೆಯದು. ಗೆಳೆಯರೆ ನಾನು ಆಕೆಗೆ ಹೇಗೆ ಹೇಳಲಿ…..)

ಬದುಕು ಬಯಲಿನ ಹಾದಿ

 ಬವಣೆ ಬಿಸಿಲಿನ ಚಹರೆ

ಯಾವ ಮಾಮರದಡಿಗೆ ಮನ

ಸತ್ತು ಸೋತು ಬಿಡುವುದೋ ಎಂದು…….

(ನನಗೊಂದು ತೋಚುತಿಲ್ಲ………)

                                                          ~ಭಾವಬೃಂಗ

Permalink ನಿಮ್ಮ ಟಿಪ್ಪಣಿ ಬರೆಯಿರಿ

Next page »