ನನ್ನ ನಿನ್ನ ಬಗ್ಗೆ ಒಂದೆರಡು ಮಾತು….

ಮಾರ್ಚ್ 27, 2007 at 3:20 ಫೂರ್ವಾಹ್ನ (ಹನಿ ಹನಿ...ಇಬ್ಬನಿ...)

Mar 15

ನನ್ನ ನಿನ್ನ ಬಗ್ಗೆ ಒಂದೆರಡು ಮಾತು….
ಕಣ್ಣು ರೆಪ್ಪಿಯಾಂಗ
ನಂಗ ನಿಂಗ ಬೆಸೇದು
ರೂಪಿಸ್ಯಾನ ಅಂಗ…
ಅರ್ಥವಿಷ್ಟೇ ಕೇಳ್ ಸಖಿ
ಅವನ ಕಲ ಕುಸುಮಕೆ
ನಾವೇ ಭಾವ brunga…..
~ ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ಮಣ್ಣು….

ಮಾರ್ಚ್ 27, 2007 at 3:13 ಫೂರ್ವಾಹ್ನ (ಹನಿ ಹನಿ...ಇಬ್ಬನಿ...)

ಮಣ್ಣು….

ಹೋಂಗನಸ ಬಾನಿನಲಿ
ನಲಿವ ಕನಸೋಳಗೂಡಿ
ಹೆಂಗೋಸಿನಂತೊಮ್ಮೆ ಆಡಲೇನೇ….
ಹೆತ್ತ ಜಗವೋಮ್ಮೆನ್ನ
ಮುದ್ದು ಚಿನ್ನ ಎನಲು
ಮಣ್ನಾಗಿ ನಾ ಅವಳ ಸೆರಲೇನೇ…..
(ನಾನು ಹೋಗಲು ಅಪ್ಪಣೆಯನ್ನು ಕೊಡುವೆಯ….)
~ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ಅವತಾರ….

ಮಾರ್ಚ್ 27, 2007 at 2:59 ಫೂರ್ವಾಹ್ನ (ಹನಿ ಹನಿ...ಇಬ್ಬನಿ...)

ಅವತಾರ….

ಗೆಳತಿ ಎನ್ನುವ ಪರದೆ
ಸರಿ ಸಿದೆ ಹೃದಯ
ನಲ್ಲೇ ಎನ್ನುವ ನುಡಿಯ ಕಲಿತು…..
ಅವಳ ನಗೆಯ…. ಅದರ ಬಗೆಯ
ಜಾಡು ಹಿಡಿಯ ಹೊರಟಿದೆ
ಮೌನದ ಅವತಾರವೆತ್ತಿ ಪ್ರೀತಿ ಬಲಿತು….
(ಸ್ನೇಹವೇ ಗುಡಿಯು….ಪ್ರೀತಿಯೇ ದೇವರು…)

~ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ನಾನೆಷ್ಟು ಚಿಕ್ಕವನು…..

ಮಾರ್ಚ್ 27, 2007 at 2:49 ಫೂರ್ವಾಹ್ನ (ಕವನ~ಬನ)

Mar 24(3 days ago)

ನಾನೆಷ್ಟು ಚಿಕ್ಕವನು…..

ನೋವುಗಳನ್ನು ನಲಿವುಗಳನ್ನು
ಹಂಚಿಕೊಳ್ಳುವ ಈ ಬದುಕು
ನಾನು ಮಾತಿಗೆ ಕುಳಿತಾಗಲೆಲ್ಲ
ಅದೇಕೋ ಮೌನವಾಗಿ ಬಿಡುತ್ತದೆ….

ಬಹಳ ಹೊತ್ತಾಗುತ್ತದೆ…
ಕತ್ತಲು ಆವರಿಸುತ್ತದೆ…
ಅಲ್ಲಲ್ಲಿ ಚುಕ್ಕಿಗಳು ಜೊತೆಗೆ
ಇಷ್ಟಗಲದ ಚಂದ್ರ ಇಣುಕುತ್ತಾನೆ
ಕತ್ತಲಲ್ಲೂ ಹಲ್ಕಿರಿದು…..

ನಾನೇ ಸೋತು ಮಾತನಾಡಿಸುತ್ತೇನೆ….
ನನಗಿಂತ ದೊಡ್ಡವನೆಂದು
ಆದರೂ ಬಲು ಗರ್ವಿ ಬದುಕು
ಕಣ್ಣ ಕಿರು ಸನ್ನೆಯಲೇ ಸುಮ್ಮನಾಗಿಸಿ ಬಿಡುತ್ತದೆ,
ನೀನು ಬಲು ಚಿಕ್ಕವನೆಂದು….

(ಗೆಳೆಯರೇ ನೀವೇ ಹೇಳಿ…. ನಾನೆಷ್ಟು ಚಿಕ್ಕವನು….. ಅವ್ನೆಷ್ಟು ದೊಡ್ಡವನು…..)

~ ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ಸಾದ್ಯವಾದರೆ ನನ್ನೊಂದಿಗೆ…ಇಲ್ಲವಾದರೆ

ಮಾರ್ಚ್ 27, 2007 at 2:47 ಫೂರ್ವಾಹ್ನ (ಕವನ~ಬನ)

Mar 24(3 days ago)

ಸಾದ್ಯವಾದರೆ ನನ್ನೊಂದಿಗೆ…ಇಲ್ಲವಾದರೆ
ನನ್ನ ಕಲ್ಪನಾ ಹುಡುಗಿಗೆ…..

ನಿನ್ನ ಮುಖ ಕಲ್ಪನೆಗೆ
ನಾನು ಕೈ ಹಾಕ ಲಾರೆ
ನಿನ್ನ ಮಾನಸಿನ ಚೆಲುವ
ಒ ಲವ ಪಡೆದವ ನಾನು
ಎಂದಿಗೂ ಅಂತಹ ತಪ್ಪ ನು ಮಾಡಲಾರೆ…

ಮುಂದೊಂದು ದಿನ ಬೆಳ್ಳಿ ಕೂದಲು
ನಿನ್ನ ತಲೆಯನೇರಿ ಕುಳಿತಾಗ….
ನಡುಗುವ ಕೈ ಮೇಲೆ ತೊಗಳ
ಪದರುಗಳು ಸರಿದಾಗ ನೆನಪಿಸಿಕೊ….

ಇಂದಿಗಿಂತಲೂ ನಿನ್ನ ಕಣ್ಣುಗಳು
ಆಗ ಬಲು ತೀಕ್ಷ್ಣ ವಾಗಿರುತ್ತವೆ….
ಪಕ್ವವಾಗಿರುವ ಆ ನಿನ್ನ ಮನಸಿನಲಿ
ಈ ಗೆಳೆಯನ ನೆನಪು ಕ್ಷಣವಾದರೂ ಆವರಿಸಿದರೆ…
ಒಮ್ಮೆ ಈ ಸಾಲುಗಳನ್ನು ನೆನಪಿಸಿಕೊ….
ನಿನ್ನೊಲುಮೆ ಮಧುರ….ನನ್ನ ತ್ಯಾಗ ಅಮರ….
(ನೂರು ವಸಂತದಲಿ ಚಿಗುರು…..(ಸಾದ್ಯವಾದರೆ)ನನ್ನೊಂದಿಗೆ….. (ಇಲ್ಲವಾದರೆ)ನನ್ನ ನೆನಪೊಂದಿಗೆ….

~ ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹಂಬಲ ……

ಮಾರ್ಚ್ 10, 2007 at 12:52 ಅಪರಾಹ್ನ (Uncategorized)

ಹಂಬಲ

ಹಂಬಲ ಏನೋ…ಹಂಬಲ
ಬಯಕೆ ಬೆನ್ನನು ಏರಿ
ರುಚಿಸಿದೆಲ್ಲವ ಹೀರಿ
ಸೃಷ್ಟಿಯ ಸೊಬಗೆಲ್ಲ
ನನ್ನದೆನ್ನುವ ಹಂಬಲ….
ನಿನ್ನ ಸೆರಗಿಡಿ ಹಂಬಲ….

ಚಿಗುರ ಮೇಲಾಡು ತಲಿ
ಮಿನುಗುತಲಿ ಹೊಳೆಯುತಲಿ
ಹಸಿರಿಗೂ ಉಸಿರಿಗೂ
ನನ್ನ ಹೆಸರಿಡುವ ಹಂಬಲ……

ಓಡುತ ಬೀಳುತ
ರಂಗು ರಂಗಿನ ಬಣ್ಣ ಬಿತ್ತೂತ
ಧೂಮು ಧುಮುಕಿ
ಧಿಕ್ಕುಗಳ ನದುಗಿಸುವ ಹಂಬಲ…….

ಬಿದ್ದರು ಎದ್ದರು
ತಬ್ಬುವ ತೋಲುಗಳ
ನಡು ನಡುವೆ…ನಡು ನಡುಗಿ
ಮರೆಯಾದರೂ ಸರಿಯೇ….
ನಿನ್ನ ಸೆರಗಿಡಿ ಹಂಬಲ…….

ನೀ…ಹೆಣ್ಣು, ನೀ……ಮಾಯೆ
ಏನಾದರೇನು….? ಯಾರಂದರೇನು…..?
ಇದು ಸತ್ಯ….ನೀ ತಾಯೇ……
ನಿನ್ನ ಸೆರಗಿಡಿ ವೆ….ಇದು ನನ್ನ ಹಂಬಲ….
ಇದು ನನ್ನ… ಅಹಂ…..ಬಲ

~ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ