ನಾಳೆ….ಎಂದವಳೆ….

ಜುಲೈ 10, 2007 at 3:42 ಫೂರ್ವಾಹ್ನ (ಕವನ~ಬನ)

ಸಿಕ್ಕಾಗಲೆಲ್ಲಾ ನಾಳೆಯೆನ್ನುವ ಗೆಳತಿ

ಇಂದು ಎನಲೇಕೆ ಭಯ…..?

ಮುಂದೆ ನಾನಿರದಿರಲು

ಹಿಂದೆ ನೋಡುವ ಧೈರ್ಯವಿದೆಯೆ ನಿನಗೆ….?

(ಎಂದು ಕೇಳಿದರೆ)

ಗೆಳೆಯ ನೀನಿರದಿರಲು ಹಿಂದೆ

ನೋಡುವುದೇಕೆ….? ನಿನ್ನ ಹೆಜ್ಜೆಯ ಗುರುತು

ಕೈ ಹಿಡಿದು ನಡೆಸುವುದು

ನಿನಗಿಂತ ಮೊದಲೆ ನಾ ಸೇರಬಲ್ಲೆ…….

(ಎನ್ನುವ ಉತ್ತರ ಆಕೆಯದು. ಗೆಳೆಯರೆ ನಾನು ಆಕೆಗೆ ಹೇಗೆ ಹೇಳಲಿ…..)

ಬದುಕು ಬಯಲಿನ ಹಾದಿ

ಬವಣೆ ಬಿಸಿಲಿನ ಚಹರೆ

ಯಾವ ಮಾಮರದಡಿಗೆ ಮನ

ಸತ್ತು ಸೋತು ಬಿಡುವುದೋ ಎಂದು…….

(ನನಗೊಂದು ತೋಚುತಿಲ್ಲ………)

Advertisements

Permalink 1 ಟಿಪ್ಪಣಿ

ಜುಲೈ 10, 2007 at 3:39 ಫೂರ್ವಾಹ್ನ (ಕವನ~ಬನ)

ಒಲುಮೆ ನೆಗೀಲು

ಅತ್ತ ಚಾಚೂತ ಇತ್ತ ಬೀಲುತ
ನಡೆದಿಹುದು ನಮ್ಮ ಯ ಯವ್ವನ
ಪಾಪ ಪುಣ್ಯಕೋ, ಪುಣ್ಯ ಪಾಪಕೋ
ಮುಖವಾಡ ಹೊತ್ತಿದೆ ಜೀವನ

ಬೆಟ್ಟ ಕಣಿವೆಯೋ ಹುಲ್ಲು ಸಂದಿಯೋ
ನಡೆ ದಂತೆ ನಡೆದಿಹ ದಾರಿಯೂ
ಆಳ ಹಗಳಗಳೆಲ್ಲ ಕಲ್ಪನೆ
ಕೇಳಿ ಬರುತಿದೆ ನಗಾರಿಯೂ

ಇಲ್ಲೊ ಸೇರುವ ಅಲ್ಲೇ ತೀರುವ
ಬಯಕೆಗೊಂದಿದೇ ಬಾಗಿಲು
ಬದುಕ ಬಯಲನು ಹಸನು
ಗೋಳಿಸಲು ಇಹುದು ಒಲುಮೆಯ ನೆಗೀಲು..

~ಶಿವಪ್ರಸಾದ್ ಹಳಿ ಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಏಕಾಂತ….

ಜುಲೈ 10, 2007 at 3:38 ಫೂರ್ವಾಹ್ನ (ಕವನ~ಬನ)

ಬಡವ ನಾನು ಬರಲು ನಡೆದು
ಮಿಡಿವುದವಳ ಹೃದಯ
ಮಲ್ಲೇ, ಜಾಜಿ ಜೀವವೆತ್ತ
ನಲ್ಲೆಯಾಕೇ(ಯಾಕೆ) ಹೊಕ್ಕಳೆನ್ನ ಮನೆಯ….?

ಹಸಿರು ಹೊಲದ ಸುತ್ತ ಅವಳ
ಉಸಿರಿನದೆ ಹಾಡು
ಇಟ್ಟ ಹೆಜ್ಜೆ ದನಿಯಲೆಲ್ಲ
ಕಟ್ಟಿದಂತೆ ಗೂಡು…..

ದೊರೆಯೇ ನಿನ್ನ ಸಿರಿಯ ತೊಳ
ಸೇರೆಯೂ ಅಂದ ನೆನಪು….
ಮರಳಿ ದಣಿಯ ಕೇಳುವಾಗ
ಬಾನಿನಂಚ ಮಿಂಚಿನಲ್ಲಿ ಕಂಡ ಕಣ್ಣ ಹೂಳಪು….

ಕಾಲು ದಾರಿ ಸುತ್ತ ಸವೇದು
ಸೊರಗಿದಂತ ಅಂತ
ಮುಡಿಯೇ ಮುಡಿಗೆ ಇತ್ತ
ಮುತ್ತನೂತ್ತು ಕಾದ ಏಕಾಂತ….

( ದಡ ಸೇರುವ ಮೊದಲೆ ಮುಳುಗಿದ ಬಾಳ ದೋಣಿಯ ಕಂಡು ನನಗನ್ನಿಸಿದ್ದು)
~ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ತೆರೆದ ಬಾಗಿಲು….

ಜುಲೈ 10, 2007 at 3:37 ಫೂರ್ವಾಹ್ನ (ಕವನ~ಬನ)

ಆ ಮನೆಯಿಂದ
ಈ ಮನೆಗೆ ಬಂದೆ
ತೆರೆದ ಬಾಗಿಲ ಕಂಡು…
ಇರಲು ಬಂದೆ…
ತೊರೆದು ಬಂದೆ…
ತೆರೆದ ಬಾಗಿಲ ಕಂಡು….

ಈ ಬೆಳಕ ಹಿಡಿದು
ಆ ಬೆಳಕ ಹುಡುಕ ಬಂದೆ
ಯಾರು ಎಂದರೆ….
ನಾನು ಚಿಗುರು ಎಂದೆ
ಬಾಗಿಲಲೇ ನಿಂದೆ
ತೆರೆದ ಬಾಗಿಲ ಕಂಡು….

ಇಲೆ ಬಿಟ್ಟ ಪರದೇ
ಆಗ ಕಾಣಲೇ ಇಲ್ಲ
ಯಾರೋ ನಿಂತಂತೆ…
ಮೌಣಗಳ ಜೆಂಕಾರ
ಒಳಗೊಳಗೆ ಏನೋ…ಅರಿವಿಗೆ ಬಾರದು
ತೆರೆದ ಬಾಗಿಲ ಕಂಡು….

ಸಡಗರದ ಮಾತುಗಳು
ಹಬ್ಬವೇ ಇರಬೇಕು….
ಬಹು ಸಂಖ್ಯೆ
ಅಂಕಿಗಳನು ಮೀರಿರುವ ಸಾದ್ಯತೆ….
ಒಳಗೆ ಹೋಗಲು ಭಯ
ತೆರೆದ ಬಾಗಿಲ ಕಂಡು….

ಹತ್ತಿರಕೆ ಬಂದಂತೆ
ಹಿಂದೆಯೇ ಕತ್ತಲು
ಚೈತ್ರಗಳ ಎದೆಯಲ್ಲಿ
ಒಣಗಿದ ಎಲೆಗಳು…..
ನನಗಿಂತ ಮೊದಲೇ ಬಂದಿದ್ದರು ಭಯ….
ತೆರೆದ ಬಾಗಿಲ ಕಂಡು….

ಮೌನ ಕವಿಯಿತು ಒಳಗೆ
ಮತ್ತೊಂದು ದಿವ್ಯವನು
ಎದುರು ನೋಡುವಂತೆ….
ಯಾವ ಗಾಳಿಗೋ ಕಾಣೆ
ಒಳ ಹೊಕ್ಕರು ಅವರು
ನಾನಿನ್ನೂ ಚಿಗುರು ಬಲು ಬಾರ
ನಿಂತಿರುವೆ ಬಾಗಿಲಲೇ….
ತೆರೆದ ಬಾಗಿಲ ಕಂಡು…..
(ನಾನು ಒಣಗ ಬೇಕು ಪಕ್ವವಾಗಲೂ ಅಲ್ಲಿಯವರೆಗೂ ಕಾಯಲೇ ಬೇಕು….ತೆರೆದೇ ಬಾಗಿಲ ಮುಂದೆ….)
~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಓ….ಅಮ್ಮ…

ಜುಲೈ 10, 2007 at 3:34 ಫೂರ್ವಾಹ್ನ (Uncategorized)

ಓ….ಶುದ್ದದಿಂದೆದ್ದ
ಬುದ್ಧ ಭಾಗೀರಥಿಯೇ
ನಿನ್ನಡಿಗೆ ಎದೆ ಇಡುವೆ
ನಿನ್ನ ನುಡಿಗೆ ತಲೆ ಕೊಡುವೆ
ಮಡಿಲ ಮಗು ಎಂದೋಮ್ಮೆ
ಮೈ ಮರೆತು ನಕ್ಕು ಬಿಡು
ಉಕ್ಕಿ ಹರಿಯಲಿ ಜಗದ
ಒಲವೆಂದು ಕೈಯ ಬಿಡು…..
(ನನಗೆ ಪದಗಲೆ ತೊಚೂತಿಲ್ಲ….ಏಕೆ ನನ್ನ ಕೈ ಗಳನ್ನು ಕಟ್ಟಿ ಹಾಕಿರುವೆ ಓ ಅಕ್ಷರ ಮಾತೆಯೇ…..ಒಮ್ಮೆ ಕೈ ಬಿಡು ನಿನ್ನ ಮಗನ ಮೇಲೆ ಕರುಣೆ ಇರಲಿ….)
~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹಾದಿ ….

ಜುಲೈ 10, 2007 at 3:33 ಫೂರ್ವಾಹ್ನ (ಕವನ~ಬನ)

ಕಾಣುವ ಹಾದಿ
ಬಳಲಿದ ಜೀವ
ಎರಡು ನಾಲ್ಕಾದ ಭಾವ….
ಕತ್ತಲಲ್ಲಿ ಎರಡು
ಬೆಳಕಿನಲ್ಲಿ ಎರಡು….
ಜೀವ ವೈವಿದ್ಯಗಳ ಸಾಕಾರ.

ಹಗಳನ್ನೇ ಇರುಲಾಗಿಸುವ
ಮಾಯಾ ರೆಪ್ಪೆ….
ಚುಕ್ಕಿಗಳ ಒಟ್ಟಾಗಿ
ಹಿಡಿದಿತ್ತ ಬಾನು…..
ಚಾಚಿಧಾಗಲೆ ಕೈ
ತಿಳಿಯುವುದು ತಾನು.

ಬಯಕೆ ಬಯಲನು ಮೀರಿ
ಬೆಳೆದ ಪರಿ ಏನು…..?
ಪರಿಧಿ ಮೀರಿದ ಬಣ್ಣ
ಪರದೆ ಹರಿಯುವುದೇನೂ…..?
ದಿಕ್ಕುಗಳ ದನಿ ಇದು
ದಿಕ್ಕೆಡಿಸುತಿದೆ ಧವಾಂತದ ನಡುವೆ…..

ದಾಹ ತುಂಬಿದ ಎಲುಬುಗಳಲ್ಲಿ
ರಕ್ತದ ಒಕೂಲಿ ಚೆಲ್ಲಿ
ತಿಳಿ ಹಾಲ ಹೊಳೆ ಹರಿಸಿ
ನಕ್ಕಾಗ ಸೆರಗಿಳಿಸಿ
ನೋವುಂಡ ಲೋಕ ವಿದು
ಗೊಲ ಅಲ್ಲವೋ ಬ್ರ್ಮಂಡವೇ ಶೂಲ ….

ಹಾದಿ ನಡೆಯುವುದಕ್ಕಲ್ಳ
ಹಾರಿ ಸೇರಲಿಕ್ಕೆ….
ಗುರಿ ತಲುಪುವುಡಕ್ಕಲ್ಳ
ದಾರಿ ಕಾಣಳಿಕ್ಕೆ…….
~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ರುದ್ರ ಚೆಲುವು …

ಜುಲೈ 10, 2007 at 3:32 ಫೂರ್ವಾಹ್ನ (ಕವನ~ಬನ)

ರುದ್ರ ಚೆಲುವು

ತಾ ಹುಟ್ಟಿಸಿದ ಹೂಗಳನೆ
ಹೊರಲಾರದ ಈ ಸೃಷ್ಟಿ…
ನೆನಪಾದರೂ ಘಳಿಗೆ
ಮಾರುಕ ಹುಟ್ಟಿಸುವುದು….

ಮಾರುಕಳಿಸಿ ಮನ್ಮಂತರಗಳನ್ನು
ಬೆಸೇದು… ಹೊಸೆದು….
ಹೊಸತೊಂದು
ಕನಸು ಅರಳುವುದು….

ಮಣ್ನ ಸೇರುವ ಭಯವೂ
ಅರಳುವಾಗಿರಲಿಲ್ಲ…
ಬಯಕೆಯೇ….ಬಲ ಎನ್ನುತಲಿ
ಅರಳಿ ನಿಂತಿತು ಮೊಗ್ಗು….

ಚೆಲುವೆಲ್ಲ ಒ ಲವ ಸಿರಿ
ಘಮ್ಮೇನುವ ಅದರ ಪರಿ
ನೋರು ಮನಸನು ಹೊಕ್ಕು
ನರ್ತಿಸಲು ಜಗಕೆ ಹಿಗ್ಗು….

ಇಂದು ಬಿದ್ದಿದೆ ಗೆಳತಿ
ಹಾದಿಯ ನಡುವಿನಲಿ
ಮುಡಿಯಾದಿದ್ದರು ಬದಿಗೆ
ತಳ್ಳಿ ಹಾಕು….

ನಡೆದವರ ಹೆಜ್ಜೆಗಳು
ಗಾರ್ಜಿಸುತ ಕೇಳುತೀವೆ…
ರುದ್ರ ಚೆಲುವಿ ಗು
ರೋವ್ಡ್ರ (ಬೀಕರ) ಬೀತಿ ಇದೆ ನಾವ್ ಅದನು ಅರಿಯ ಬೇಕು….

(ಎಂತಹ ಸುಂದರವಾದ ಸೃಷ್ಟಿಯು ಒಂದು ದಿನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳ ಬೇಕಾಗುತ್ತದೆ….ನೀವು ನಡೆಯುವ ಹಾದಿಯಲ್ಲಿ ಬಿದ್ದ ಹೂವುಗಳನ್ನೇ ಒಮ್ಮೆ ನೋಡಿ…. ನನ್ನ ಮಾತು ಸರಿಯೆಂದಾದ್ರೆ ನನಗೊಂದು ನಿಮ್ಮ ಸಂದೇಶ ಕಳುಹಿಸಿ….ತಪ್ಪಾಗಿದ್ದರು….ಸಹ)
~ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ