ಓ….ಅಮ್ಮ…

ಜುಲೈ 10, 2007 at 3:34 ಫೂರ್ವಾಹ್ನ (Uncategorized)

ಓ….ಶುದ್ದದಿಂದೆದ್ದ
ಬುದ್ಧ ಭಾಗೀರಥಿಯೇ
ನಿನ್ನಡಿಗೆ ಎದೆ ಇಡುವೆ
ನಿನ್ನ ನುಡಿಗೆ ತಲೆ ಕೊಡುವೆ
ಮಡಿಲ ಮಗು ಎಂದೋಮ್ಮೆ
ಮೈ ಮರೆತು ನಕ್ಕು ಬಿಡು
ಉಕ್ಕಿ ಹರಿಯಲಿ ಜಗದ
ಒಲವೆಂದು ಕೈಯ ಬಿಡು…..
(ನನಗೆ ಪದಗಲೆ ತೊಚೂತಿಲ್ಲ….ಏಕೆ ನನ್ನ ಕೈ ಗಳನ್ನು ಕಟ್ಟಿ ಹಾಕಿರುವೆ ಓ ಅಕ್ಷರ ಮಾತೆಯೇ…..ಒಮ್ಮೆ ಕೈ ಬಿಡು ನಿನ್ನ ಮಗನ ಮೇಲೆ ಕರುಣೆ ಇರಲಿ….)
~ಶಿವಪ್ರಸಾದ್ ಹಳಿಮನಿ

Advertisements

ಪರ್ಮಾಲಿಂಕ್ ನಿಮ್ಮ ಟಿಪ್ಪಣಿ ಬರೆಯಿರಿ

ಹಂಬಲ ……

ಮಾರ್ಚ್ 10, 2007 at 12:52 ಅಪರಾಹ್ನ (Uncategorized)

ಹಂಬಲ

ಹಂಬಲ ಏನೋ…ಹಂಬಲ
ಬಯಕೆ ಬೆನ್ನನು ಏರಿ
ರುಚಿಸಿದೆಲ್ಲವ ಹೀರಿ
ಸೃಷ್ಟಿಯ ಸೊಬಗೆಲ್ಲ
ನನ್ನದೆನ್ನುವ ಹಂಬಲ….
ನಿನ್ನ ಸೆರಗಿಡಿ ಹಂಬಲ….

ಚಿಗುರ ಮೇಲಾಡು ತಲಿ
ಮಿನುಗುತಲಿ ಹೊಳೆಯುತಲಿ
ಹಸಿರಿಗೂ ಉಸಿರಿಗೂ
ನನ್ನ ಹೆಸರಿಡುವ ಹಂಬಲ……

ಓಡುತ ಬೀಳುತ
ರಂಗು ರಂಗಿನ ಬಣ್ಣ ಬಿತ್ತೂತ
ಧೂಮು ಧುಮುಕಿ
ಧಿಕ್ಕುಗಳ ನದುಗಿಸುವ ಹಂಬಲ…….

ಬಿದ್ದರು ಎದ್ದರು
ತಬ್ಬುವ ತೋಲುಗಳ
ನಡು ನಡುವೆ…ನಡು ನಡುಗಿ
ಮರೆಯಾದರೂ ಸರಿಯೇ….
ನಿನ್ನ ಸೆರಗಿಡಿ ಹಂಬಲ…….

ನೀ…ಹೆಣ್ಣು, ನೀ……ಮಾಯೆ
ಏನಾದರೇನು….? ಯಾರಂದರೇನು…..?
ಇದು ಸತ್ಯ….ನೀ ತಾಯೇ……
ನಿನ್ನ ಸೆರಗಿಡಿ ವೆ….ಇದು ನನ್ನ ಹಂಬಲ….
ಇದು ನನ್ನ… ಅಹಂ…..ಬಲ

~ಶಿವಪ್ರಸಾದ್

ಪರ್ಮಾಲಿಂಕ್ ನಿಮ್ಮ ಟಿಪ್ಪಣಿ ಬರೆಯಿರಿ