ನಾನೆಷ್ಟು ಚಿಕ್ಕವನು…..

ಮಾರ್ಚ್ 27, 2007 at 2:49 ಫೂರ್ವಾಹ್ನ (ಕವನ~ಬನ)

Mar 24(3 days ago)

ನಾನೆಷ್ಟು ಚಿಕ್ಕವನು…..

ನೋವುಗಳನ್ನು ನಲಿವುಗಳನ್ನು
ಹಂಚಿಕೊಳ್ಳುವ ಈ ಬದುಕು
ನಾನು ಮಾತಿಗೆ ಕುಳಿತಾಗಲೆಲ್ಲ
ಅದೇಕೋ ಮೌನವಾಗಿ ಬಿಡುತ್ತದೆ….

ಬಹಳ ಹೊತ್ತಾಗುತ್ತದೆ…
ಕತ್ತಲು ಆವರಿಸುತ್ತದೆ…
ಅಲ್ಲಲ್ಲಿ ಚುಕ್ಕಿಗಳು ಜೊತೆಗೆ
ಇಷ್ಟಗಲದ ಚಂದ್ರ ಇಣುಕುತ್ತಾನೆ
ಕತ್ತಲಲ್ಲೂ ಹಲ್ಕಿರಿದು…..

ನಾನೇ ಸೋತು ಮಾತನಾಡಿಸುತ್ತೇನೆ….
ನನಗಿಂತ ದೊಡ್ಡವನೆಂದು
ಆದರೂ ಬಲು ಗರ್ವಿ ಬದುಕು
ಕಣ್ಣ ಕಿರು ಸನ್ನೆಯಲೇ ಸುಮ್ಮನಾಗಿಸಿ ಬಿಡುತ್ತದೆ,
ನೀನು ಬಲು ಚಿಕ್ಕವನೆಂದು….

(ಗೆಳೆಯರೇ ನೀವೇ ಹೇಳಿ…. ನಾನೆಷ್ಟು ಚಿಕ್ಕವನು….. ಅವ್ನೆಷ್ಟು ದೊಡ್ಡವನು…..)

~ ಶಿವಪ್ರಸಾದ್

Advertisements

Permalink ನಿಮ್ಮ ಟಿಪ್ಪಣಿ ಬರೆಯಿರಿ

ಸಾದ್ಯವಾದರೆ ನನ್ನೊಂದಿಗೆ…ಇಲ್ಲವಾದರೆ

ಮಾರ್ಚ್ 27, 2007 at 2:47 ಫೂರ್ವಾಹ್ನ (ಕವನ~ಬನ)

Mar 24(3 days ago)

ಸಾದ್ಯವಾದರೆ ನನ್ನೊಂದಿಗೆ…ಇಲ್ಲವಾದರೆ
ನನ್ನ ಕಲ್ಪನಾ ಹುಡುಗಿಗೆ…..

ನಿನ್ನ ಮುಖ ಕಲ್ಪನೆಗೆ
ನಾನು ಕೈ ಹಾಕ ಲಾರೆ
ನಿನ್ನ ಮಾನಸಿನ ಚೆಲುವ
ಒ ಲವ ಪಡೆದವ ನಾನು
ಎಂದಿಗೂ ಅಂತಹ ತಪ್ಪ ನು ಮಾಡಲಾರೆ…

ಮುಂದೊಂದು ದಿನ ಬೆಳ್ಳಿ ಕೂದಲು
ನಿನ್ನ ತಲೆಯನೇರಿ ಕುಳಿತಾಗ….
ನಡುಗುವ ಕೈ ಮೇಲೆ ತೊಗಳ
ಪದರುಗಳು ಸರಿದಾಗ ನೆನಪಿಸಿಕೊ….

ಇಂದಿಗಿಂತಲೂ ನಿನ್ನ ಕಣ್ಣುಗಳು
ಆಗ ಬಲು ತೀಕ್ಷ್ಣ ವಾಗಿರುತ್ತವೆ….
ಪಕ್ವವಾಗಿರುವ ಆ ನಿನ್ನ ಮನಸಿನಲಿ
ಈ ಗೆಳೆಯನ ನೆನಪು ಕ್ಷಣವಾದರೂ ಆವರಿಸಿದರೆ…
ಒಮ್ಮೆ ಈ ಸಾಲುಗಳನ್ನು ನೆನಪಿಸಿಕೊ….
ನಿನ್ನೊಲುಮೆ ಮಧುರ….ನನ್ನ ತ್ಯಾಗ ಅಮರ….
(ನೂರು ವಸಂತದಲಿ ಚಿಗುರು…..(ಸಾದ್ಯವಾದರೆ)ನನ್ನೊಂದಿಗೆ….. (ಇಲ್ಲವಾದರೆ)ನನ್ನ ನೆನಪೊಂದಿಗೆ….

~ ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹಂಬಲ ……

ಮಾರ್ಚ್ 10, 2007 at 12:52 ಅಪರಾಹ್ನ (Uncategorized)

ಹಂಬಲ

ಹಂಬಲ ಏನೋ…ಹಂಬಲ
ಬಯಕೆ ಬೆನ್ನನು ಏರಿ
ರುಚಿಸಿದೆಲ್ಲವ ಹೀರಿ
ಸೃಷ್ಟಿಯ ಸೊಬಗೆಲ್ಲ
ನನ್ನದೆನ್ನುವ ಹಂಬಲ….
ನಿನ್ನ ಸೆರಗಿಡಿ ಹಂಬಲ….

ಚಿಗುರ ಮೇಲಾಡು ತಲಿ
ಮಿನುಗುತಲಿ ಹೊಳೆಯುತಲಿ
ಹಸಿರಿಗೂ ಉಸಿರಿಗೂ
ನನ್ನ ಹೆಸರಿಡುವ ಹಂಬಲ……

ಓಡುತ ಬೀಳುತ
ರಂಗು ರಂಗಿನ ಬಣ್ಣ ಬಿತ್ತೂತ
ಧೂಮು ಧುಮುಕಿ
ಧಿಕ್ಕುಗಳ ನದುಗಿಸುವ ಹಂಬಲ…….

ಬಿದ್ದರು ಎದ್ದರು
ತಬ್ಬುವ ತೋಲುಗಳ
ನಡು ನಡುವೆ…ನಡು ನಡುಗಿ
ಮರೆಯಾದರೂ ಸರಿಯೇ….
ನಿನ್ನ ಸೆರಗಿಡಿ ಹಂಬಲ…….

ನೀ…ಹೆಣ್ಣು, ನೀ……ಮಾಯೆ
ಏನಾದರೇನು….? ಯಾರಂದರೇನು…..?
ಇದು ಸತ್ಯ….ನೀ ತಾಯೇ……
ನಿನ್ನ ಸೆರಗಿಡಿ ವೆ….ಇದು ನನ್ನ ಹಂಬಲ….
ಇದು ನನ್ನ… ಅಹಂ…..ಬಲ

~ಶಿವಪ್ರಸಾದ್

Permalink ನಿಮ್ಮ ಟಿಪ್ಪಣಿ ಬರೆಯಿರಿ

ಆಹ್ವಾನ…

ಫೆಬ್ರವರಿ 25, 2007 at 3:55 ಅಪರಾಹ್ನ (ಹನಿ ಹನಿ...ಇಬ್ಬನಿ...)

ಆ ಬಾನ ದಾಟೋಣ

ಈ ಕಣ್ಣ ತೆರೆಯೋಣ

ಬಾನ ಬಣ್ಣಕೂ ಮೀರಿ

ಮಿನುಗೋಣು ಬಾರ….

ಚುಕ್ಕಿ ಚಂದ್ರಮರ ಎದೆಯ

ಮೇಲೆ ಮೆಲ್ಲಡಿಯಿಡುತಾ

ಮಣ್ಣಿಂದ ಮಣ್ಣಿಗೆ

ಜಾರೋಣು ಬಾರಾ…

                                       ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಕನಸಲ್ಲಿ ಗಾಂಧಿ ರಸ್ತೆ

ಫೆಬ್ರವರಿ 25, 2007 at 3:51 ಅಪರಾಹ್ನ (ಹನಿ ಹನಿ...ಇಬ್ಬನಿ...)

ಮಹಾತ್ಮ ಗಾಂಧಿಯ

ಹೆಸರನ್ನೊತ್ತ ರಸ್ತೆ

ಅವನಂತೆ ನೇರ ವ್ಯಕ್ತಿತ್ವವನ್ನು

ಸಾರುವಂತೆ ಸೆರಗ ಹೊದ್ದು ನಿಂತಿದ್ದಳು

ಕನ್ನಡತಿಯೇ ನಾಚುವಂತೆ….(ಕನಸಲ್ಲಿ)

                {ಇಲ್ಲಿ ರಸ್ತೆ ಅವಳಾಗಿದ್ದಳು}

                         ~ ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹನಿ ಮುತ್ತಾದ ಹೊತ್ತು

ಫೆಬ್ರವರಿ 25, 2007 at 3:47 ಅಪರಾಹ್ನ (ಹನಿ ಹನಿ...ಇಬ್ಬನಿ...)

ಭದ್ರವಾಗಿದ್ದ ಹೃದಯ

ಕೋಟೆಯ ಒಳಗೆ

ಅದು ಹೇಗೆ ಹೊಕ್ಕೆನೋ

ಕಾಣೆ?…. ನಾನು ಹನಿ….

ಹೊರಬರುವಾಗ ನಲ್ಲೆ

ಹಾಲುಗೆನ್ನೆಯ ಮೇಲೆ ಮುತ್ತಾಗಿ ಹೋಗಿದ್ದೆ….

                                               ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ತುಟಿಗಳೊಳಗೆ ಮುತ್ತಾಗಿ….

ಫೆಬ್ರವರಿ 25, 2007 at 3:44 ಅಪರಾಹ್ನ (ಹನಿ ಹನಿ...ಇಬ್ಬನಿ...)

ನಿನ್ನ ಮೈ ಸ್ಪರ್ಶಕೆ

ಮನ ಕರಗಿ ಆವಿಯಾಗಿತ್ತು

ದಿಟ್ಟಿಸುವ ಸೂರ್ಯನನ್ನು ಎದುರಿಸಿ

ಆದರೆ ಬಹಳ ಹೊತ್ತು ನಿಲ್ಲಲಾಗಲಿಲ್ಲ..

ಒಡೆದ ತುಟಿಗಳ ಮೇಲೆ

ಒಣಗಿದ ಹನಿಗಳನ್ನು

ಕಂಡು ಕರಗಿ ಹೋಗಿದ್ದೆ

ಕಣ್ತೆರೆಯುವ ಮೊದಲೇ

ಅಪ್ಪಿದ ತುಟಿಗಳೊಳಗೆ…ಮುತ್ತಾಗಿದ್ದೆ….

                                                ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ನಾಚಿಕೆ…

ಫೆಬ್ರವರಿ 25, 2007 at 3:40 ಅಪರಾಹ್ನ (ಹನಿ ಹನಿ...ಇಬ್ಬನಿ...)

ಪ್ರತಿಯೊಂದು ಮಾತು

ಕೊನೆಯಾದಾಗಲೆಲ್ಲ ಏನೋ ತುಡಿತ,

ಏನೋ ಭಯ

ಜೊತೆಜೊತೆಗೆ ನಾಚಿಕೆ

ಎಷ್ಟು ಬೇಗ ಮುಗಿಸಿದೆಯೆಂದು….

                                          ಈ ಕವನವೂ….

                                          ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಮೂರ್ಖ….

ಫೆಬ್ರವರಿ 25, 2007 at 3:36 ಅಪರಾಹ್ನ (ಹನಿ ಹನಿ...ಇಬ್ಬನಿ...)

ಹೇ ಮನಸೇ… ನಿನ್ನಂತಹ

ಶತಃಮೂರ್ಖ ಇನ್ನೊಬ್ಬನಿಲ್ಲ.

ನಿನ್ನಾಕೆಯ ಕೈಗಳನ್ನಿಡಿದು ನೀನು

ಹೊರಟಾಗಲೆಲ್ಲ ನಾನು ಮುಖವನ್ನು

ಕೆಳಗೆ ಮಾಡಿ ಕಳ್ಳನಂತೆ ನೊಡುತ್ತಿದ್ದೆ…

ಆದರೆ ನನಗಿಂತ ಮೋಸಗಾರನು ನೀನು

ನನಗೆ ಕೇಳದಂತೆಯೇ ಪಿಸುಗುಡುತ್ತಿದ್ದೆ

ನಿನಗೆ ಕಣ್ಣಾಗುವೆ ಎಂದು….

                                        ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

ಹೇ… ಮನಸೇ

ಫೆಬ್ರವರಿ 25, 2007 at 3:31 ಅಪರಾಹ್ನ (ಕವನ~ಬನ)

ಹೇ ಮನಸೆ…. ಇನ್ನೊಮ್ಮೆ

ಹೀಗೆ ಕದ್ದು ನೋಡಬೇಡ.

ಮರಗಳ ಹಿಂದಿನ ಮಾತನ್ನು

ನೀ ಹಾಗೆ ಕೇಳುವುದು ತಪ್ಪಲ್ಲ..

ಆದರೆ ಆ ಗುಸು ಪಿಸುಮಾತಿನ

ನಡು ನಡುವಿನ ನಡುಕವನ್ನು

ನೋಡುವುದು ತಪ್ಪು….

ಕೋಪಿಸಿಕೊಂಡೆಯಾ.. ಕ್ಷಮಿಸು….

ಎನ್ನಲಾರೆ, ನಾಳೆ ಮತ್ತೆ ಬಾ

ನಿನಗಾಗಿ ಇನ್ನೊಂದು ಜೋಡಿ

ಕಾದಿರುತ್ತದೆ … ಆದರೆ … ನಿನಗೆ..?

ನಡುಕ ಹುಟ್ಟಿಸಿತೇ ನನ್ನ ಮಾತು

ಹೌದಾದರೆ ನಾನು ಖಂಡಿತವಾಗಿಯೂ

ನಿನ್ನ ಮನಸ್ಸೆ….

                  ~ಶಿವಪ್ರಸಾದ್ ಹಳಿಮನಿ

Permalink ನಿಮ್ಮ ಟಿಪ್ಪಣಿ ಬರೆಯಿರಿ

« Previous page · Next page »